ಸಂಖ್ಯೆ:29/11, ಉದಯ ಸಹಕಾರ ಭವನ, ಮೌಂಟ್ ಜಾಯ್ ರಸ್ತೆ, 1ನೆ ಮುಖ್ಯ ರಸ್ತೆ,
ಬೆಂಗಳೂರು-560 019

ಕೆಲಸದ ವೇಳೆ

ಸೋಮವಾರದಿಂದ ಶನಿವಾರದವರೆಗೆ

ಬೆಳಿಗ್ಗೆ 10:00 ರಿಂದ ಸಂಜೆ 7:00 ರವರೆಗೆ

ಭಾನುವಾರ ರಜಾದಿನ

ನವೀನತೆ ನಮ್ಮ ಯೋಜನೆಗಳು


ಐಶ್ವರ್ಯ ಠೇವಣಿ ಪತ್ರ

ಐಶ್ವರ್ಯ ಠೇವಣಿ ಪತ್ರ ಸಾಮಾನ್ಯ ಸದಸ್ಯರಿಗೆ 99 ತಿಂಗಳಲ್ಲಿ ದ್ವಿಗುಣಗೊಳ್ಳುತ್ತದೆ.
ಹಿರಿಯ ಸದಸ್ಯ ಬಂಧುಗಳಿಗೆ 94 ತಿಂಗಳಿನಲ್ಲಿ ದ್ವಿಗುಣಗೊಳ್ಳುತ್ತದೆ.

ಸ್ವರ್ಣ ಠೇವಣಿ ಪತ್ರ

ಪರಿಷ್ಕರಣೆ ಅಡಿಯಲ್ಲಿ.


ಐಶ್ವರ್ಯ ಮತ್ತು ಸ್ವರ್ಣ ಠೇವಣಿ ಪತ್ರ

ಐಶ್ವರ್ಯ ಮತ್ತು ಸ್ವರ್ಣ ಠೇವಣಿ ಪತ್ರವನ್ನು ಆಧಾರವಾಗಿಟ್ಟು ಅಗತ್ಯ ಪರಿಸ್ಥಿತಿಯಲ್ಲಿ ಸಾಲ ಸೌಲಭ್ಯವನ್ನು ಪಡೆಯಬಹುದು. ಠೇವಣಿ ಪತ್ರದ ಒಟ್ಟು ಮೊಬಲಗು ಮೊತ್ತದ 80% ಶೇಕಡ ಹಣವನ್ನು ಸಾಲವಾಗಿ

ಸಂಚಯಿತ ಠೇವಣಿ

ಸಂಚಯಿತ ಠೇವಣಿ ಖಾತೆಯಲ್ಲಿ ಒಬ್ಬ ಸದಸ್ಯನು ಒಂದು ನಿಗದಿತ ಹಣವನ್ನು ನಿಗದಿತ ಅವಧಿಗೆ ಅಂದರೆ 12,24,36 ತಿಂಗಳಿಗೆ ಪಾವತಿ ಮಾಡಬಹುದು. ಬಡ್ಡಿಯ ದರ ಕ್ರಮವಾಗಿ 6.5%, 7.5% ಮತ್ತು 8.5% ಇರುತ್ತದೆ.

ಸದಸ್ಯರಿಗೆ ಮಾಸಿಕ ಸಣ್ಣ ಪ್ರಮಾಣದ ಹಣವನ್ನು ಉಳಿತಾಯ ಮಾಡುವ ಯೋಜನೆಯಾಗಿದೆ. ಈ ರೀತಿಯ ನಿಯಮಿತ ಹಣದ ಉಳಿತಾಯವು ಸದಸ್ಯರ ಅಲ್ಪಾವಧಿ,ದೀರ್ಘಾವಧಿ ಮತ್ತು ತುರ್ತು ಪರಿಸ್ಥಿತಿಯ ಅಗತ್ಯತೆಗೆ ಸಹಕಾರಿಯಾಗಿದೆ.

ಚೀಟಿ ಯೋಜನೆಗಳು

ಸಣ್ಣ ಪ್ರಮಾಣದಿಂದ ಅಗತ್ಯತೆಗಳಿಗೆ ತಕ್ಕಂತೆ ಉಳಿತಾಯ ಮಾಡುವ ಸದಸ್ಯರಿಗೆ ಅನುಕೂಲವಾಗುವಂತೆ ರೂ. 1 ಲಕ್ಷದಿಂದ ರೂ 10 ಲಕ್ಷದವರೆಗೆ ಚೀಟಿ ಯೋಜನೆಗಳನ್ನು ಕರ್ನಾಟಕ ಸರ್ಕಾರದ ಚೀಟಿ ಕಾಯ್ದೆಗೆ ಅನುಗುಣವಾಗಿ ನಡೆಸಲಾಗುತ್ತಿದೆ.

40 ತಿಂಗಳುಗಳ ಮಾಸಿಕ ಕಂತುಗಳಲ್ಲಿ ಸರಿದೂಗಿಸುವಂತಹ ಹಣವನ್ನು ಪಾವತಿಸಿ ,ಅಗತ್ಯ ಸಂದರ್ಭಗಳಲ್ಲಿ ಹಣವನ್ನು ಪಡೆದು ಸದಸ್ಯರು ತಮ್ಮ ಆವಶ್ಯಕತೆಗಳನ್ನು ಸರಿದೂಗಿಸುವಂತಹ ನಿರ್ದಿಷ್ಠ ಉದ್ದೇಶಗಳಿಗಾಗಿ ಉಳಿತಾಯ ಮಾಡಿ ನಿರ್ದಿಷ್ಠ ಸಮಯದಲ್ಲಿ ಹಣವನ್ನು ಪಡೆದು ನಿಶ್ಚಿಂತೆಯಾಗಿ ಜೀವನ ಸಾಗಿಸಲು ಸಹಾಯ ಮಾಡುವಂತ, ಸದಸ್ಯರ ಲಾಭದಾಯಕ ಯೋಜನೆಯಾಗಿದೆ.ಸದಸ್ಯರು ಸಾಲದ ಸುಳಿಗೆ ಸಿಲುಕದೆ ತಮ್ಮ ಕಾರ್ಯಗಳನ್ನು ಸುಲಭವಾಗಿ ಪೂರೈಸಿಕೊಳ್ಳಬಹುದಾಗಿರುತ್ತದೆ.