ಇ-ಸ್ಟ್ಯಾಂಪಿಂಗ್

ಕರ್ನಾಟಕ ಸರ್ಕಾರ ಸೌಹಾರ್ದ ಕಾಯಿದೆ ಅಡಿಯಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಉದಯ ಸೌಹಾರ್ದ ಸಹಕಾರಿ ಯು ಇ-ಸ್ಟ್ಯಾಂಪಿಂಗ್ ವ್ಯವಹಾರವನ್ನು ಹೊಂದಿದೆ.
"ಇ-ಸ್ಟ್ಯಾಂಪಿಂಗ್" ಅಂದರೆ ಸೆಂಟ್ರಲ್ ರೆಕಾರ್ಡ್ ಕೀಪಿಂಗ್ ಏಜೆನ್ಸಿ ಯಿಂದ ಕಾಯ್ದೆ ಬದ್ಧ ಪತ್ರದ ತೆರಿಗೆಯ ಪಾವತಿಯನ್ನು ವಿದ್ಯುನ್ಮಾನದ ಮೂಲಕ ಕಾಗದದ ಮೇಲೆ ಮುದ್ರಿಸುವುದು.
“ಅಧಿಕೃತ ಸ್ಟ್ಯಾಂಪಿಂಗ್ ಸೆಂಟರ್” ಅಂದರೆ ಸೆಂಟ್ರಲ್ ರೆಕಾರ್ಡ್ ಕೀಪಿಂಗ್ ಏಜೆನ್ಸಿ ಮೊದಲೇ ಅನುಮತಿ ಪಡೆದು ಸೆಂಟ್ರಲ್ ರೆಕಾರ್ಡ್ ಕೀಪಿಂಗ್ ಏಜೆನ್ಸಿ ಮತ್ತು ಕಾಯಿದೆಬದ್ಧಪತ್ರದ ತೆರಿಗೆ ಪಾವತಿಸುವವನ ಮಧ್ಯವರ್ತಿಯಾಗಿ ಕಾರ್ಯ ನಿರ್ವಹಿಸಿ ತೆರಿಗೆ ವಸೂಲಿ ಮತ್ತು ಇ-ಸ್ಟ್ಯಾಂಪಿಂಗ್ ಪ್ರಮಾಣಪತ್ರ ಕೊಡಲು ಸೆಂಟ್ರಲ್ ರೆಕಾರ್ಡ್ ಕೀಪಿಂಗ್ ಏಜೆನ್ಸಿ ಯಿಂದ ನಿಯೋಜಿಸಲ್ಪಟ್ಟ ನಿಯೋಗಿ.
ಇ-ಸ್ಟಾಂಪ್ ಪ್ರಮಾಣಪತ್ರಕ್ಕಾಗಿ ಅರ್ಜಿ
ಕಾಯಿದೆಬದ್ಧಪತ್ರದ ತೆರಿಗೆ ಪಾವತಿಸುವ ಯಾರೇ ವ್ಯಕ್ತಿ ಇ-ಸ್ಟ್ಯಾಂಪಿಂಗ್ ಪ್ರಮಾಣಪತ್ರ ಪಡೆಯಲು, ಕಾಯ್ದೆ ಬದ್ಧ ಪತ್ರದ ತೆರಿಗೆ ಪಾವತಿಯ ಮೊತ್ತದ ಸಹಿತ, ಆವಶ್ಯಕ ವಿವರಗಳನ್ನು FORM-3 ಯಲ್ಲಿ ನಮೂದಿಸಿ ಯಾವುದೇ ಮಂಜೂರಾದ ಮಧ್ಯವರ್ತಿ/ ಹಣ ಸಂಗ್ರಹಿಸಲು ಹಕ್ಕು ಪಡೆದ ಕೇಂದ್ರಗಳಿಗೆ ಹೋಗಬಹುದು. .
ಕಾಯ್ದೆ ಬದ್ಧ ಪತ್ರದ ತೆರಿಗೆ
" ಕಾಯ್ದೆ ಬದ್ಧಪತ್ರದ" ತೆರಿಗೆ ಅಂದರೆ ಈ ಕಾಯಿದೆಯನ್ವಯ ಪಾವತಿಸಬೇಕಾದ ತೆರಿಗೆ.
ಇ-ಸ್ಟ್ಯಾಂಪಿಂಗ್ ಪ್ರಮಾಣಪತ್ರದ ಉಪಯೋಗ
ಇ-ಸ್ಟ್ಯಾಂಪಿಂಗ್ ಪ್ರಮಾಣಪತ್ರದ ಅರ್ಧಭಾಗ ದಸ್ತಾವೇಜಿನ ಮೇಲ್ಭಾಗದಲ್ಲಿಯೂ ಇನ್ನರ್ಧ ಭಾಗ ಕೆಳಭಾಗ ದಲ್ಲಿಯೂ ಬರುವಂತೆ ಕಾಗದದ ಮೇಲೆ ಬರೆದ ಪ್ರತಿ ದಸ್ತಾವೇಜಿನ ಮೇಲೆ ಇ-ಸ್ಟ್ಯಾಂಪಿಂಗ್ ಪ್ರಮಾಣಪತ್ರದ ಮೊಹರು ಹಾಕಬೇಕು, ಹೀಗಾಗಿ ಇ-ಸ್ಟ್ಯಾಂಪಿಂಗ್ ಪ್ರಮಾಣಪತ್ರದ ದುರುಪಯೋಗವಾಗಲಾರದು
ತೆರಿಗೆ ಪಾವತಿಸಿದ ದಸ್ತಾವೇಜಿನ ಮೇಲೆ ಒಮ್ಮೆ ಇ-ಸ್ಟ್ಯಾಂಪಿಂಗ್ ಪ್ರಮಾಣಪತ್ರ ಉಪಯೋಗಿಸಿದ ಬಳಿಕ ಇನ್ನೊಮ್ಮೆ ತೆರಿಗೆ ಪಾವತಿಯ ಬಗ್ಗೆ ದಸ್ತಾವೇಜಿನ ಮೇಲೆ ಇ-ಸ್ಟ್ಯಾಂಪಿಂಗ್ ಪ್ರಮಾಣಪತ್ರ ಉಪಯೋಗಿಸುವಂತಿಲ್ಲ