ಸಂಖ್ಯೆ:29/11,ಉದಯ ಸಹಕಾರ ಭವನ ಮೌಂಟ್ ಜಾಯ್ ರಸ್ತೆ, 1ನೆ ಮುಖ್ಯ ರಸ್ತೆ,
ಬೆಂಗಳೂರು-560 019

ಕೆಲಸದ ವೇಳೆ

ಸೋಮವಾರದಿಂದ ಶನಿವಾರದವರೆಗೆ

ಬೆಳಿಗ್ಗೆ 10:00 ರಿಂದ ಸಂಜೆ 7:00 ರವರೆಗೆ
ಊಟದ ಸಮಯ : ಮಧ್ಯಾಹ್ನ 2:00 ರಿಂದ 3:00 ರವರೆಗೆ

ಭಾನುವಾರ ರಜಾದಿನ

ಇತಿಹಾಸ


ಭಾರತ ದೇಶದ ಸಹಕಾರಿ ಚಳುವಳಿಗೆ ಸುಮಾರು 114 ವರ್ಷದ ಇತಿಹಾಸವಿದೆ. 1905 ರಲ್ಲಿ ಮೊಟ್ಟಮೊದಲ ಸಹಕಾರ ಸಂಸ್ಥೆಯನ್ನು ಸ್ಥಾಪಿಸಿದ ಕೀರ್ತಿ ಕರ್ನಾಟಕಕ್ಕೆ ಸಲ್ಲುತ್ತದೆ. ಗದುಗಿನ ಕಣಗಿನಹಾಳ ಗ್ರಾಮದಲ್ಲಿ ಸಿದ್ದನಗೌಡ ಸಣ್ಣ ರಾಮನಗೌಡ ಪಾಟೀಲರು ಸಹಕಾರಿ ಸಂಸ್ಥೆಯನ್ನು ಸ್ಥಾಪಿಸುವುದರ ಮೂಲಕ ಭಾರತೀಯ ಸಹಕಾರಿ ಚಳುವಳಿಗೆ ನಾಂದಿ ಹಾಡಿದರು. ಇದೇ ಹಾದಿಯಲ್ಲಿ ಬೆಂಗಳೂರಿನ ಪ್ರತಿಷ್ಠಿತ ಬಡಾವಣೆ ಹನುಮಂತನಗರದಲ್ಲಿ ಸಮಾಜದ ಕೆಳ ಮತ್ತು ಮಧ್ಯಮ ವರ್ಗದ ಆರ್ಥಿಕ ಅಗತ್ಯ ಸೇವೆಗಳ ನೆರವಿಗಾಗಿ ಸಹಕಾರಿ ಸಂಸ್ಥೆಯ ಆವಶ್ಯಕತೆಯನ್ನು ಮನಗಂಡು ಸಮಾನ ಮನಸ್ಕರೆಲ್ಲಾ ಒಂದುಗೂಡಿ 1996 ರಲ್ಲಿ “ಉದಯ ಪತ್ತಿನ ಸಹಕಾರಿ ಸಂಘ”ವು ದಿ. ಎಮ್. ವಿ. ಸೂರ್ಯನಾರಾಯಣ ಅವರ ಮಾರ್ಗದರ್ಶನ ಮತ್ತು ಸಲಹೆಯೊಂದಿಗೆ ಶ್ರೀಯುತ ಬಿ. ಎಸ್. ಗುಂಡುರಾವ್ ರವರ ನೇತ್ರತ್ವದಲ್ಲಿ ಶ್ರೀ ಎನ್. ಚಂದ್ರಶೇಖರ್, ಶ್ರೀಯುತ ತೇಜಮಲ್, ಶ್ರೀಮತಿ ಲಕ್ಷ್ಮಿ ಶ್ರೀನಿವಾಸ್ ಸಹಯೋಗದೊಂದಿಗೆ ಕರ್ನಾಟಕ ಸರಕಾರದ 1959 ನೆಯ ಸಹಕಾರಿ ಕಾಯ್ದೆಯ ಅನ್ವಯ ಸ್ಥಾಪಿಸಲಾಯಿತು.

ಒಂದು ಸಣ್ಣ ಕೊಠಡಿಯಲ್ಲಿ 500 ಜನ ಸದಸ್ಯರೊಂದಿಗೆ 5 ಲಕ್ಷ ಷೇರು ಬಂಡವಾಳದೊಂದಿಗೆ ಸ್ಥಾಪನೆಯಾದ ಉದಯ ಪತ್ತಿನ ಸಹಕಾರಿ ಸಂಘ ಇಂದು ಉದಯ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ, 1997 ರ ಕರ್ನಾಟಕ ಸೌಹಾರ್ದ ಕಾಯ್ದೆಗೆ ಒಳಪಟ್ಟಿದ್ದು ೩ ಕೋಟಿಗೂ ಅಧಿಕ ಷೇರು ಬಂಡವಾಳವನ್ನು ಹೊಂದಿದ್ದು 121 ಕೋಟಿ ದುಡಿಯುವ ಬಂಡವಾಳದೊಂದಿಗೆ 4000 ಸದಸ್ಯ ಬಂಧುಗಳನ್ನು ಹೊಂದಿದ್ದು ತನ್ನ ಕಾರ್ಯವ್ಯಾಪ್ತಿಯನ್ನು ಕರ್ನಾಟಕ ರಾಜ್ಯದಾದ್ಯಂತ ವಿಸ್ತರಿಸಲಾಗಿದೆ.

ಸಾಧನೆಗಳು:

ನಮ್ಮ ಸಹಕಾರಿಯು ಸುಮಾರು 3200 ಚ. ಅಡಿಗಳ ನಿವೇಶನದಲ್ಲಿ 4 ಅಂತಸ್ತಿನ ನವೀನ ಮಾದರಿಯ ಸುಸಜ್ಜಿತ ವ್ಯವಸ್ಥೆಯುಳ್ಳ ಭವ್ಯ ಕಟ್ಟಡ ಹೊಂದಿದೆ.

ಈ ಭವ್ಯ ಕಟ್ಟಡದಲ್ಲಿ ಸದಸ್ಯರಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಪೂರಕ ಸಂಸ್ಥೆಯ ಮೂಲಕ ಡಯಾಗ್ನಷ್ಟಿಕ್ ಕೇಂದ್ರವನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಇದರಿಂದ ಸದಸ್ಯ ಬಂಧುಗಳ ಆರೋಗ್ಯದ ಜೊತೆಗೆ ತಗಲುವ ವೆಚ್ಚವನ್ನು ಕಡಿಮೆಗೊಳಿಸುವ ಹಾಗು ಸಾರ್ವಜನಿಕರಿಗೂ ನೆರವು ನೀಡಿ, ಸಮಾಜದ ಒಳಿತಿಗಾಗಿ ಶ್ರಮವಹಿಸುತ್ತಿದೆ.

ಸಹಕಾರಿಯ ಆರೋಗ್ಯ ನಿಧಿಯಿಂದ ಸಹಕಾರಿಯ ಸದಸ್ಯರಿಗೆ ಅನಾರೋಗ್ಯದ ತುರ್ತು ಸಂದರ್ಭಗಳಲ್ಲಿ ಆರ್ಥಿಕ ನೆರವು ನೀಡಲಾಗುತ್ತಿದೆ.

 • 2004 - ರೂ 5.00 ಕೋಟಿಯ ಷೇರು ಬಂಡವಾಳ ಮತ್ತು ಇದರ ಸ್ವಂತ ಕಟ್ಟಡದ ನಿರ್ಮಾಣ

  ಈ ಸಹಕಾರಿಯು ಮೂಲಧನ ರೂ. 10.00 ಕೋಟಿಯನ್ನು ವಿನಿಯೋಗಿಸಿ ವೈಭವಯುತ ಸುಸಜ್ಜಿತ ತನ್ನದೇ ಸ್ವಂತ ಕಟ್ಟಡವನ್ನು ನಿರ್ಮಿಸಲಾಗಿದೆ.

 • 2017 - ಸಂಶೋಧನೆ ಮತ್ತು ಅಧ್ಯಯನಕ್ಕಾಗಿ ಉದಯ ಸಹಕಾರಿಯು ಆರಿಸಲ್ಪಟ್ಟಿದೆ

  2017 ರಲ್ಲಿ ನಮ್ಮ ಸಹಕಾರಿಯು, ಭಾರತ-ಕೆನಡಾ ಸಹಭಾಗಿತ್ವದಲ್ಲಿ ICA-AP ವತಿಯಿಂದ ಭಾರತದಲ್ಲಿ ಸಹಕಾರಿ ವಿಭಾಗದ ಸಂಶೋಧನೆ ಮತ್ತು ಅಧ್ಯಯಕ್ಕಾಗಿ ಆರಿಸಲ್ಪಟ್ಟಿದೆ.

 • 2013 – ಅತ್ಯುತ್ತಮ ಸಹಕಾರಿ ಸಂಘ

  2013ರಲ್ಲಿ ಈ ಸಹಕಾರಿಯು, ಕರ್ನಾಟಕ ರಾಜ್ಯದ ಅತ್ಯುತ್ತಮ ಸಹಕಾರಿಗಳಲ್ಲಿ ಒಂದು ಎಂದು ಗೌರವಿಸಲ್ಪಟ್ಟಿದೆ.

 • 2009 – ಉತ್ತರ ಕರ್ನಾಟಕದಲ್ಲಿ ನೆರೆ ಪೀಡಿತರಿಗೆ ಅಗತ್ಯ ಜೀವನಾವಶ್ಯಕ ವಸ್ತುಗಳನ್ನು ಪೂರೈಸುವ ಮೂಲಕ ನೆರವು ನೀಡಿದೆ.

  ಸಾಮಾಜಿಕ ಕಳಕಳಿ ಮತ್ತು ಜವಾಬ್ದಾರಿಯಿಂದ 2009 ರಲ್ಲಿ ಉತ್ತರ ಕರ್ನಾಟಕದ ನೆರೆ ಪೀಡಿತರಿಗೆ ನಾವು ನೀಡಿದ ನೆರವು ಎಲ್ಲ.ರಿಂದಲೂ ಪ್ರಶಂಸಿಲ್ಪಟ್ಟಿದೆ.

 • 1996 -ಷೇರು ಬಂಡವಾಳ 5,00,000 ದೊಂದಿಗೆ ಪ್ರಾರಂಭಿಸಲಾಯಿತು.

  1996 ರಲ್ಲಿ ಉದಯವು 529 ಸದಸ್ಯರಿಂದ ಷೇರು ಬಂಡವಾಳ 5,00,000 ದೊಂದಿಗೆ ಪ್ರಾರಂಭಗೊಂಡಿತು. ಈಗ 2018 ರಲ್ಲಿ ಈ ಸಹಕಾರಿಯು ರೂ 3.00 ಕೋಟಿಗೂ ಅಧಿಕ ಷೇರು ಬಂಡವಾಳವನ್ನು ಹೊಂದಿದೆ ಹಾಗೂ ರೂ. 5.00 ಕೋಟಿಯನ್ನು ತಲುಪುವತ್ತ ಮುನ್ನುಗ್ಗುತ್ತಿದೆ.