ಮೊತ್ತ | ಬಡ್ಡಿದರ |
---|---|
ಒಂದು ಲಕ್ಷದಿಂದ ಒಂದು ಕೋಟಿವರೆಗೆ | 14.00% |
ಸ್ಥಿರ ಆಸ್ತಿಯ ಸರಳ ಅಡಮಾನ.
ಅನ್ವಯಿಸುವ ಪ್ರಕಾರ.
ಅನ್ವಯಿಸುವ ಪ್ರಕಾರ.
ಸಹಕಾರಿಯ ಸುಸ್ತಿದಾರರಲ್ಲದ ಇಬ್ಬರು ಸದಸ್ಯರ ಜಾಮೀನು ನೀಡಬೇಕು.
1. ಹಾಲಿ ಸಹಕಾರಿಯ ಉಪನಿಭಂದನೆಗಳನ್ವಯ ಮಂಜೂರಾಗಿರುವ ಸಾಲಕ್ಕೆ ಅವಶ್ಯಕವಿರುವ ಷೇರು/ಠೇವಣಿಯನ್ನು ಹೊಂದಲು ಕೋರಿದೆ.
2. ತಾವು ಸಹಕಾರಿಗೆ ಅಡಮಾನ ಮಾಡಲಿರುವ ಆಸ್ತಿಯ ನೊಂದಣಿ ವೆಚ್ಚವನ್ನು ತಮ್ಮದೇ ಖರ್ಚಿನಲ್ಲಿ ಮಾಡಲು ಕೋರಿದೆ.
3. ಮಂಜೂರಾಗಿರುವ ಸಾಲಕ್ಕೆ ಸಂಬಂದಿಸಿದಂತೆ ಸಾಲ ಪ್ರಕ್ರಿಯಾ ಶುಲ್ಕ ಮತ್ತು ಇತರೆ ಶುಲ್ಕಗಳನ್ನು ಭರಿಸಬೇಕಾಗುತ್ತದೆ.
4. ಸದರಿ ಸಾಲಕ್ಕೆ ಸಂಬಂದಿಸಿದಂತೆ ಸಾಲಗಾರ ಮತ್ತು ಜಾಮೀನುದಾರರು ಅಗತ್ಯವಿರುವ ದಾಖಾಲಾತಿಗಳನ್ನು ಒದಗಿಸಬೇಕಾಗುತ್ತದೆ ಮತ್ತು ಅಗತ್ಯ ದಾಖಾಲಾತಿಗಳಲ್ಲಿ ಸಹಿ ಮಾಡಬೇಕಾಗಿರುತ್ತದೆ.
5. ಅರ್ಜಿದಾರರು ಸಹಕಾರಿಗೆ ಆಧಾರವಾಗಿ ಒದಗಿಸಿರುವ ಸ್ಥಿರಾಸ್ತಿಯನ್ನು ಸುಸ್ಥಿತಿಯಲ್ಲಿಡಲು ಸೂಚಿಸಿದೆ. ಮತ್ತು ಸಂಬಂದಿಸಿದ ತೆರಿಗೆ/ಕಂದಾಯ/ವಿಮೆ ಇತರೆ
ವೆಚ್ಚಗಳನ್ನು ಕಾಲಕಾಲಕ್ಕೆ ಪಾವತಿಸಲು ಸೂಚಿಸಿದೆ. ಅವಶ್ಯಕತೆ ಬಂದ ಸಂದರ್ಭಗಳಲ್ಲಿ
ಸಹಕಾರಿಯ ನಿಯೋಜಿತ ಅಧಿಕಾರಿಗಳು ಯಾವುದೇ ಸಮಯದಲ್ಲಿ ತಪಾಸಣೆ ಮಾಡುವ ಅಧಿಕಾರವನ್ನು/ಹಕ್ಕನ್ನು ಸಹಕಾರಿಯು ಕಾಯ್ದಿರಿಸಿಕೊಂಡಿದೆ.
6. ಸಾಲದ ಕಂತನ್ನು ಪ್ರತೀ ತಿಂಗಳೂ 01ರಿಂದ 10ನೇ ದಿನಾಂಕದೊಳಗೆ ಪಾವತಿಸತಕ್ಕದ್ದು. ನಿಗಧಿತ ದಿನಾಂಕದೊಳಗೆ ಸಾಲದ ಕಂತು
ಮರುಪಾವತಿಯಾಗದಿದ್ದಲ್ಲಿ ಬಾಕಿ ಉಳಿಯುವ ಸಾಲದ ಮೇಲೆ ವಾರ್ಷಿಕ ಶೇ.1 ಹೆಚ್ಚುವರಿ ಬಡ್ಡಿಯನ್ನು
ವಿಧಿಸಲಾಗುವುದು.
7. ಸಾಲದ ಕಂತು ಮರುಪಾವತಿಯಾಗದೇ ಸುಸ್ತಿಯಾದಲ್ಲಿ ಜಾಮೀನುದಾರರೂ ಸಹ ಜವಾಬ್ದಾರರಾಗಿರುತ್ತಾರೆ.