ಸಂಖ್ಯೆ:29/11, ಉದಯ ಸಹಕಾರ ಭವನ, ಮೌಂಟ್ ಜಾಯ್ ರಸ್ತೆ, 1ನೆ ಮುಖ್ಯ ರಸ್ತೆ,
ಬೆಂಗಳೂರು-560 019

ಕೆಲಸದ ವೇಳೆ

ಸೋಮವಾರದಿಂದ ಶನಿವಾರದವರೆಗೆ

ಬೆಳಿಗ್ಗೆ 10:00 ರಿಂದ ಸಂಜೆ 7.00 ರವರೆಗೆ
ಊಟದ ಸಮಯ : ಮಧ್ಯಾಹ್ನ 2:00 ರಿಂದ 3:00 ರವರೆಗೆ

ಭಾನುವಾರ ರಜಾದಿನ

ಅಧ್ಯಕ್ಷರ ಸಂದೇಶ


ಶ್ರೀ. ಬಿ. ಎಸ್. ಗುಂಡುರಾವ್.


ಅಧ್ಯಕ್ಷರು, ಉದಯ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ
ನಿರ್ದೇಶಕರು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ

ಉದಯ ಸೌಹಾರ್ದ ಪತ್ತಿನ ಸಹಕಾರಿ ಸಂಸ್ಥೆಗೆ ಸ್ವಾಗತ
ಸಮಾಜದ ಏಳಿಗೆಗಾಗಿ, ನಮ್ಮ ಸದಸ್ಯ ಬಂದುಗಳ ಆರ್ಥಿಕತೆಯ ಸುಭದ್ರತೆಗಾಗಿ, ನಮ್ಮ ಗ್ರಾಹಕರ ಅನೇಕ ಕನಸುಗಳನ್ನು ನನಸುಮಾಡಲಿಕ್ಕಾಗಿ 1996 ರಲ್ಲಿ ಹುಟ್ಟುಪಡೆದ ಈ ನಮ್ಮ ಉದಯ ಸೌಹಾರ್ದ ಪತ್ತಿನ ಸಹಕಾರಿ ಸಂಸ್ಥೆ, ಕಳೆದ ಎರಡು ದಶಕಗಳಿಂದ ನಮ್ಮ ಗ್ರಾಹಕರ/ ನಮ್ಮ ಸದಸ್ಯಬಂದುಗಳ ಮನೋಭಿಲಾಷೆಗಳನ್ನು ಸಾಕಾರಗೊಳಿಸುತ್ತಾ ಬಂದಿದೆ ಎಂದು ಹೇಳಿಕೋಳ್ಳುವಲ್ಲಿ ನಾವು ಹೆಮ್ಮೆ ಪಡುತ್ತೇವೆ.

ನಾನು ನಮ್ಮ ಸಹಕಾರಿಯ ಸಂಸ್ಥಾಪಕ ಅಧ್ಯಕ್ಷನಾಗಿ, ಕಳೆದ 24 ವರ್ಷಳಿಂದ ಕಾರ್ಯನಿರ್ವಹಿಸುತ್ತಾ. ಸಂಸ್ಥೆಯ ನನ್ನ ಎಲ್ಲ ಆಡಳಿತಮಂಡಳಿ ನಿರ್ದೇಶಕರ ಸಹಕಾರದೊಂದಿಗೆ, ದೇಶದಾದ್ಯಂತ ಅನೇಕ ಸಹಕಾರಿ ಚಳುವಳಿಯಲ್ಲಿ ಭಾಗವಹಿಸಿ, ಸಂಸ್ಥೆಯ ಧ್ಯೇಯೋದ್ದೇಶಗಳನ್ನು ಕರ್ನಾಟಕದ ಉದ್ದಗಲಕ್ಕೂ ಪಸರಿಸಿ, ಕಟ್ಟಿಬೆಳಸಿದಂತಹ ಸಂಸ್ಥೆ ನಮ್ಮದು. ಈ ನಿಟ್ಟಿನಲ್ಲಿ ನಮ್ಮ ಸಹಕಾರಿಯು ಕೈಗೊಂಡಂತಹ ಅನೇಕ ಯೋಜನೆಗಳು , ಕಾರ್ಯಚಟುವಟಿಕೆಗಳಿಗೆ ನಮ್ಮ ಸದಸ್ಯಬಂದುಗಳಿಂದ ದೊರೆತ ಸ್ಪಂದನೆ , ಪ್ರೋತ್ಸಾಹ , ಸಹಕಾರ ಅತ್ಯುತ್ತಮವಾಗಿದೆ.

ಒಂದು ಸಣ್ಣ ಕೊಠಡಿಯಲ್ಲಿ ಪ್ರಾರಂಭವಾದ ಸಂಸ್ಥೆ, ಸಾಧನೆಗಳ ಮೆಟ್ಟಿಲುಗಳನ್ನು ಏರುತ್ತಾ ಆರ್ಥಿಕವಾಗಿ ಲಾಭದಯಕವವಾಗಿ ಸದೃಢವಾದ ಭುನಾದಿಯೊಂದಿಗೆ, ಇಂದು ಸಮಾಜದ ಸರ್ವತೋಮುಖ ಬೆಳವಣಿಗೆಗೆ ಅನೇಕ ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೂಂಡು, ಕರ್ನಾಟಕ ರಾಜ್ಯದಲ್ಲಿ ಒಂದು ಯಶಸ್ವಿ ಸಹಕಾರಿ ಸಂಸ್ಥೆಯಾಗಿ, "ಸಹಕಾರಿ ರತ್ನ" ಪ್ರಶಸ್ಥಿಗೆ ಪಾತ್ರವಾಗಿದೆ ಎಂದು ತಿಳಿಸಲು ಹೆಮ್ಮೆಯಾಗುತ್ತದೆ.

ಈ ನಮ್ಮ ಸಮಾಜಮುಖಿ ಬೆಳವಣಿಗೆಯಲ್ಲಿ ಪ್ರತಿವರ್ಷವೂ ಬಡವರ್ಗದ, ಸೌಕರ್ಯವಂಚಿತ ಶಾಲಾಮಕ್ಕಳ ಶಿಕ್ಷಣಕ್ಕೆ ಒತ್ತುಕೊಡುವ ನಿಟ್ಟಿನಲ್ಲಿ, ಅಂತಹ ಮಕ್ಕಳನ್ನು ಗುರುತಿಸಿ, ಶಾಲಾ ಶಿಕ್ಷಣಕ್ಕೆ ಬೇಕಾದ ಎಲ್ಲ ಸವಲತ್ತುಗಳನ್ನು ಒದಗಿಸಿಕೊಡುವ ಮೂಲಕ, ನಮ್ಮ ಸಂಸ್ಥೆ ಬಡವಿದ್ಯಾರ್ಥಿಗಳ ಕಣ್ಗಳಲ್ಲಿ ಕಲಿಕೆಯ ಹರ್ಷವನ್ನು ತುಂಬಿಸಿದೆ. ವಿದ್ಯಾಭ್ಯಾಸ ಕ್ಷೇತ್ರದಲ್ಲಿ ಉತ್ತಮ ಶ್ರೇಯಾಂಕ ಪಡೆದು ತೇರ್ಗಡೆಯಾಗುವ ನಮ್ಮ ಸದಸ್ಯಬಂದುಗಳ ಮಕ್ಕಳಿಗೆ ಕೂಡ, ಪ್ರತಿವರ್ಷ "ಪ್ರತಿಭಾ ಪುರಸ್ಕಾರ" ಎಂಬ ಕಾರ್ಯಕ್ರಮದಡಿಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಸ್ಮಾನಿಸುವ ಮೂಲಕ ಅವರಲ್ಲಿ ಅರಳಿರುವ ಪ್ರತಿಭೆಯನ್ನು ಗೌರವಿಸಲಾಗುತ್ತಿದೆ.

ಕಿರಿಯರಷ್ಟೇ ಅಲ್ಲ, ನಮ್ಮ ಸಂಸ್ಥೆಯ ಹಿರಿಯ ಸದಸ್ಯರು ಕೂಡ ನಮ್ಮ ಆತ್ಮೀಯ ಬಂದುಗಳು, ನಮ್ಮ ಮಾರ್ಗದರ್ಶಕರು ನಮ್ಮನ್ನು ಕೈಹಿಡಿದು ನಡೆಸಿದವರು. ಹಲವಾರು ವರ್ಷಗಳಿಂದ, ಪ್ರಾ ಯಃ ಕೆಲವರಂತೂ ನಮ್ಮ ಸಂಸ್ಥೆ ಹುಟ್ಟುಪಡೆದಾಗಿನಿಂದ ನಮ್ಮೂಂದಿಗೆ ಕೈಜೋಡಿಸಿ ನಿಂತು ನಮ್ಮ ಎಲ್ಲ ಕಾರ್ಯಯೋಜನೆಗಳನ್ನು ತುಂಬುಹೃದಯದಿಂದ ಸ್ವಾಗತಿಸಿ, ಅಭಿನಂದಿಸಿದವರು, ಆಶೀರ್ವದಿಸಿದವರು. ಅಂತಹ ಹಿರಿಯ ಚೇತನಗಳನ್ನು ನಮಸ್ಕರಿಸಿ ಗೌರವಿಸುವ ನಮ್ಮ ಕಾರ್ಯಕ್ರಮ "ಹಿರಿಯ ನಾಗರೀಕ ಸನ್ಮಾನ" ಪ್ರತಿ ವರ್ಷವೂ ನಮ್ಮ ಸಂಸ್ಥೆಯವತಿಯಿಂದ ನಡೆದುಬಂದಿರುವ ಕಾರ್ಯಕ್ರಮವಾಗಿದೆ.

ಕಳೆದ ಮೂರ್ನಾಕು ವರ್ಷಳಿಂದ, ಯಾವುದೇ ಸಾಮಾಜಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ / ಸಲ್ಲಿಸುತ್ತಿರುವ ಗಣ್ಯವ್ಯಕಿಗಳನ್ನು ಕರೆತಂದು ಅವರ ಸಾಧನೆಗಳನ್ನು. ಆ ವ್ಯಕಿಗಳನ್ನು ನಮ್ಮ ಸಹಕಾರಿ ಬಂಧುಗಳಿಗೆ ಪರಿಚಯಿಸುವುದರ ಜೊತೆಗೆ , ಆ ಪುಣ್ಯಚೇತನಗಳನ್ನು ಹೃತ್ಪೊರ್ವಕವಾಗಿ ಗೌರವಿಸುವ ಸುಂದರ ಕಾರ್ಯಕ್ರಮ "ಗಣ್ಯವ್ಯಕ್ತಿಗಳ ಸನ್ಮಾನ" ನಡೆದುಬಂದಿದೆ.

ನಮ್ಮ ಸದಸ್ಯ ಬಂಧುಗಳೇ ನಮ್ಮ ಜೀವಾಳ ಸಹಕಾರ ಅಂದರೇನೇ "ಒಬ್ಬರು ಮತ್ತೊಬ್ಬರಿಗೆ ನೆರವು ನೀಡುವುದು" ಅಂತ ಅರ್ಥ.... "ತಾನು ಎಲ್ಲರಿಗಾಗಿ ಎಲ್ಲರೂ ತನಗಾಗಿ" ಎಂಬ ಸಹಬಾಳ್ವೆಯ ತತ್ವದಡಿ ನಮ್ಮ ಸಂಸ್ಥೆ. ನಮ್ಮ ಸದಸ್ಯ ಬಂಧುಗಳೊಟ್ವಿಗೆ ಹೆಜ್ಜೆ ಹಾಕುತ್ತಿದೆ. ಈ ಮೂಲಕ ಅತ್ಯುನ್ನತ ಮಟ್ಟದ ಸೇವೆಯನ್ನು ಕೊಟ್ಟು ನಮ್ಮ ಗ್ರಾಹಕರ ಜೊತೆಗೆ ಅರ್ಥಪೂರ್ಣ ಸಂಬಂಧ ಹೊಂದಿರುವ ನಮ್ಮ ಉದಯ ಪತ್ತಿನ ಸಹಕಾರಿ ಸಂಸ್ಥೆ. ಗ್ರಾಹಕರ ಆರ್ಥಿಕ ಬೇಡಿಕೆಗಳನ್ನು ಈಡೇರಿಸುತ್ತಾ ಸಮಗ್ರತೆಯ ಉತ್ಕೃಷ್ಟತೆಯನ್ನು ಸಾಧಿಸಿದೆ.

"ಉದಯ ಸೌಹಾರ್ದ" ಎಂಬ ಹೆಸರು ಇಂದು ಸಹಕಾರಿ ಕ್ಷೇತ್ರದಲ್ಲಿ ಮನೆಮಾತಾಗಿರುವ ಸಂಸ್ಥೆಯಾಗಿದೆ . ಈ ನಮ್ಮ ಸಂಸ್ಥೆ ಸಹಕಾರಿ ಕ್ಷೇತ್ರದಲ್ಲಿ ಒಂದು ಸಂಸ್ಥೆಯಾಗಲು ಮುಖ್ಯ ಕಾರಣವೇ ನಮ್ಮ ಸದಸ್ಯ ಬಂಧುಗಳು ನಮ್ಮ ಎಲ್ಲ ಯೋಜನೆಗಳಲ್ಲಿ ಕಾರ್ಯಕ್ರಮಗಳಲ್ಲಿ, ಅತ್ಯಂತ ಉತ್ಸಾಹದಿಂದ ತಮ್ಮನ್ನು ತೊಡಗಿಸಿಕೊಳ್ಳುವುದರ ಜೊತೆಗೆ ಸಹಭಾಗಿಗಳಾಗಿ ಸಹಕಾರಿಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತಿರುವುದು.

ಇನ್ನೂ ಹೆಚ್ಚಿನದನ್ನು ಸಾಧಿಸಲು, ಬನ್ನಿ ! ನಮ್ಮೊಂದಿಗೆ ಕೈಜೋಡಿಸಿ ಸ್ವಾಯತ್ತತೆ, ಸಮಾಜಿಕ ಬದ್ದತೆ.ಸಕಾರಾತ್ಮಕ ಚಿಂತನೆಗಳೊಂದಿಗೆ, ಅಭಿವೃದ್ಧಿಪರ ರಾಷ್ಟ್ರಮಾದರಿ, ವಿಶ್ವಮಾದರಿ ಸಂಸ್ಥೆಯಾಗಿ ಕಾರ್ಯನಿರ್ವಹಿಸೋಣ ಜೊತೆಯಾಗಿ ಬೆಳೆಯೋಣ. "ಉದಯ ಸೌಹಾರ್ದ ಪತ್ತಿನ ಸಹಕಾರಿ (ನಿ) "ದ ಸಾಮಾಜಿಕ ಜಾಲತಾಣ ವೀಕ್ಷಕರಿಗಾಗಿ, ಸಂಸ್ಥೆಯ ಪರವಾಗಿ ನನ್ನದೊಂದು ಪೂರಕ ಮಾಹಿತಿ ಇದಾಗಿದೆ. ತಮಗೆ ಉಪಯೋಗವಾದೀತೆಂದು ಭಾವಿಸುತ್ತೇನೆ.

ನಮಸ್ಕಾರ!!!