ಸಂಖ್ಯೆ:29/11, ಉದಯ ಸಹಕಾರ ಭವನ, ಮೌಂಟ್ ಜಾಯ್ ರಸ್ತೆ, 1ನೆ ಮುಖ್ಯ ರಸ್ತೆ,
ಬೆಂಗಳೂರು-560 019

ಕೆಲಸದ ವೇಳೆ

ಸೋಮವಾರದಿಂದ ಶನಿವಾರದವರೆಗೆ

ಬೆಳಿಗ್ಗೆ 10:00 ರಿಂದ ಸಂಜೆ 7.00 ರವರೆಗೆ
ಊಟದ ಸಮಯ : ಮಧ್ಯಾಹ್ನ 2:00 ರಿಂದ 3:00 ರವರೆಗೆ

ಭಾನುವಾರ ರಜಾದಿನ

ಯಶಸ್ಸಿನ ಕಥೆ


1996 ರಲ್ಲಿ ಸ್ಥಾಪಿತವಾದ ನಮ್ಮ ಸಂಸ್ಥೆ, ಉತ್ತಮ ಆಡಳಿತ ಮಂಡಳಿ, ಸಕ್ರಿಯವಾಗಿ ಭಾಗವಹಿಸುವ ಸದಸ್ಯರು ಹಾಗು ಪ್ರಾರಂಭದಿಂದಲೂ ಸಂಸ್ಥೆಯನ್ನು ಪೋಷಿಸಿಕೊಂಡು ಬಂದ ಹಿರಿಯ ಸದಸ್ಯ ಬಂಧುಗಳು , ಎಲ್ಲಾ ಹಂತಗಳಲ್ಲೂ ನಮಗೆ ಸಲಹೆ, ಸೂಚನೆಗಳನ್ನು ನೀಡಿದ ಸಹಕಾರಿ ಇಲಾಖೆಯ ಅಧಿಕಾರಿಗಳ ನೆರವಿನಿಂದ ಸಾಧನೆಯ ಮೆಟ್ಟಿಲುಗಳನ್ನು ಏರುತ್ತಾ, ಸಂಸ್ಥೆಯನ್ನು ಆರ್ಥಿಕವಾಗಿ ಸಧೃಡವಾಗಿ ಬೆಳೆಸಿ, ಸಂಸ್ಥೆಯು ಹಲವಾರು ಯೋಜನೆಗಳನ್ನು ರೂಪಿಸಿ, ಸಮಾಜದ ಎಲ್ಲಾ ವರ್ಗದ ಜನರ ಏಳಿಗೆಗೆ ನೆರವಾಗಿ ಇಂದು ಕರ್ನಾಟಕ ರಾಜ್ಯದಲ್ಲಿ ಒಂದು ಅತ್ಯುತ್ತಮ ಸಹಕಾರಿ ಎಂದು ಹೆಸರು ಗಳಿಸಿದೆ. ಈ ಬೆಳವಣಿಗೆಗೆ ಮತ್ತು ಯಶಸ್ಸಿಗೆ ಕಾರಣರಾದ ತಮಗೆಲ್ಲರಿಗೂ ನಮ್ಮ ಧನ್ಯವಾದಗಳು .

  • 2017-18 ನೆ ಸಾಲಿನಲ್ಲಿ ನಮ್ಮ ಸದಸ್ಯರ ಪ್ರತೀ 100/-ರೂ ಬೆಲೆಯ ಷೇರಿಗೆ 40/-ರೂ ಗಳಿಸಿದೆ.
  • ಠೇವಣಿಗಳ ಸಂಗ್ರಹಣೆ,ಸಾಲಗಳ ವಿತರಣೆ,ಸಾಲ ವಸೂಲಾತಿಯಲ್ಲಿ ಹೆಚ್ಜಿನ ಪ್ರಗತಿಯನ್ನು ಸಾಧಿಸಿದೆ.

ಸಹಕಾರಿಯ ಸ್ವಂತ ಕಟ್ಟಡ

3200 ಚ. ಅಡಿಗಳ ನಿವೇಶನದಲ್ಲಿ 4 ಅಂತಸ್ತಿನ ನವೀನ ಮಾದರಿಯ ಸುಸಜ್ಜಿತ ಭವ್ಯ ಕಟ್ಟಡ ನಿರ್ಮಿತವಾಗಿದ್ದು ಸದಸ್ಯರ ಸೇವೆಗೆ ಸಿದ್ಧವಾಗಿದೆ.

  • ಈ ಕಟ್ಟಡವು ಸದಸ್ಯರಿಗೆ ಅನುಕೂಲವಾಗುವಂತೆ ಆರೋಗ್ಯ ತಪಾಸಣ ಕೇಂದ್ರವನ್ನು ನಿರ್ಮಿಸಲು ಸ್ಥಳವನ್ನು ಮೀಸಲಿಡಲಾಗಿದೆ.
  • ಸದಸ್ಯರ ಅನುಕೂಲತೆಗಾಗಿ ಸಣ್ಣ ಪುಟ್ಟ ಕಾರ್ಯಕ್ರಮಗಳನ್ನು ನಡೆಸಲು ಸುಸಜ್ಜಿತ ಸಭಾಂಗಣವನ್ನು ನಿರ್ಮಿಸಲಾಗಿದೆ.

ವಿದ್ಯಾರ್ಥಿಗಳಿಗೆ ಶಿಕ್ಷಣ ನೆರವು

ಇಂದಿನ ಯುವಪೀಳಿಗೆ ನಮ್ಮ ಭವ್ಯ ಭಾರತದ ಬೆನ್ನೆಲುಬು. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನು ಪೋಷಿಸಿ,ಹಾರೈಸಿ,ನೆರವು ನೀಡಿ,ಅವರನ್ನು ದೇಶದ ಮುಂದಿನ ಆಸ್ತಿಗಳನ್ನಾಗಿ ಮಾಡುವುದು ನಮ್ಮ ಕರ್ತವ್ಯ. ನಮ್ಮ ಸಹಕಾರಿಯ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿ ವರ್ಷವು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೂಂಡು ಅವರನ್ನು ಸನ್ಮಾನಿಸಿ ಪ್ರೋತ್ಸಾಹವನ್ನು ನೀಡುತ್ತಾ ಬಂದಿದೆ. ಈ ಸಂದರ್ಭದಲ್ಲಿ ಸುತ್ತಮುತ್ತಲಿನ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿರುವ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೂ ಪ್ರೋತ್ಸಾಹ ನೀಡಿ ಆರ್ಥಿಕ ಸಹಾಯವನ್ನು ನೀಡುತ್ತಾಬಂದಿದೆ.ಇದು ನಮ್ಮ ಸಮಾಜಿಕ ಜವಾಬ್ಧಾರಿಯಾಗಿದೆ.

ಹಿರಿಯ ನಾಗರಿಕ ಸದಸ್ಯ ಬಂಧುಗಳಿಗೆ ಸನ್ಮಾನ

ನಮ್ಮ ಸಂಸ್ಥೆಯ ಏಳಗೆಗೆ 24 ವರ್ಷಗಳ ಕಾಲ ನಮ್ಮೊಂದಿಗೆ ಸಹಕಾರ ನೀಡಿ, ಸಲಹೆ ಉತ್ತೇಜನೆಗಳೊಂದಿಗೆ ನಮ್ಮನ್ನು ಪ್ರೋತ್ಸಾಹಿಸಿದ ಹಿರಿಯ ನಾಗರಿಕ ಬಂಧುಗಳನ್ನು ಗುರುತಿಸಿ ಅವರಿಗೂ ಕೂಡ ಸನ್ಮಾನ ಹಾಗೂ ಪ್ರೋತ್ಸಾಹವನ್ನು ಸಂಸ್ಥೆ ನೀಡುತ್ತಿದೆ.

ಶ್ರೀ ರಾಮನವಮಿ ಸಾಂಸ್ಕೃತಿಕ ಹಬ್ಬವನ್ನು ಪ್ರತಿ ವರ್ಷ ವಿಜೃಂಬಣೆಯಿಂದ ಆಚರಿಸುತ್ತೇವೆ.


ಕರ್ನಾಟಕ ರಾಜ್ಯದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿ ಆರ್ಥಿಕವಾಗಿ ಹಿಂದುಳಿದಂತಹ ಗಣ್ಯರನ್ನು ಗುರುತಿಸಿ ಅವರಿಗೆ ಸಂಸ್ಥೆಯ ಸರ್ವಸದಸ್ಯರ ಸಭೆಯಂದು ಗೌರವವನ್ನು ನೀಡುತ್ತಾ ಬಂದಿದ್ದೇವೆ. ಸ್ವಾತಂತ್ರ ಹೋರಾಟಗಾರರಾದ ದೊರೆಸ್ವಾಮಿ,ಸಾಲುಮರದ ತಿಮ್ಮಕ್ಕ, ವಿಕಲಚೇತನ ಒಲಂಪಿಕ್ ಈಜುಗಾರ ಶ್ರೀ.ವಿಶ್ವಾಸ್, ಕೆ.ಎಸ್, ಹಾಲಕ್ಕಿ ಜನಪದ ಗೀತೆಗಳ ಪದ್ಮಶ್ರೀ ಪುರಸ್ಕೃತ ವಿಜೇತರಾದ ಶ್ರೀಮತಿ ಸುಕ್ರಿ ಬೊಮ್ಮಗೌಡ, ವಿಶ್ವಸಂಸ್ಥೆಯ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಅಶ್ವಿನಿ ಅಂಗಡಿ, ಚಲನಚಿತ್ರ ನಟರಾದ ಆರ್.ಟಿ.ರಮಾ, ಶ್ರೀಮತಿ ಶೈಲಶ್ರೀ, ಶ್ರೀ ಬಿರಾದರ್, ಶ್ರೀಯುತ ಶಿವಶಂಕರ್ (ನಿರ್ದೇಶಕರು), ಭಾರತದ ಅಂದರ ಕ್ರಿಕೆಟ್ ನಾಯಕ ಶ್ರೀ ಪ್ರಕಾಶ್ ಜಯರಾಮಯ್ಯ ಮುಂತಾದವರು ನಮ್ಮ ಗೌರವವನ್ನು ಸ್ವೀಕರಿಸಿದ್ಧಾರೆ.


ಮರಣೋತ್ತರ ಪರಿಹಾರ ನಿಧಿ

ನಮ್ಮ ಸಂಸ್ಥೆಯ ಸ್ಥಾಪನೆಗೆ ಶ್ರಮಿಸಿದ ದಿವಂಗತ ಶ್ರೀ ಎಂ.ವಿ. ಸೂರ್ಯ ನಾರಾಯಣ ರವರ ಹೆಸರಿನಲ್ಲಿ ಮರಣೋತ್ತರ ಪರಿಹಾರ ನಿಧಿಯನ್ನು ಸ್ಥಾಪಿಸಿ,ಈ ಯೋಜನೆಯಲ್ಲಿ ನೋಂದಾಯಿಸಿದ ಸದಸ್ಯರು ದೈವಾಧೀನರಾದ ಸಂದರ್ಭದಲ್ಲಿ ಅವರು ಸೂಚಸಿದ ನಾಮಿನಿಗೆ 25 ಸಾವಿರ ರೂಪಾಯಿಗಳ ಪರಿಹಾರ ಧನ ನೀಡಲಾಗುತ್ತದೆ.